ಸಚಿನ್! ತೆಂಡೂಲ್ಕರ್ ಅಲ್ಲ ಮಾಸ್ಟರ್ ಸ್ನೇಹಿತ್, ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್, ಸುಹಾಸಿನಿ ಮಣಿರತ್ನಂ ಮತ್ತು ಸುಧಾರಾಣಿ ನಟಿಸಿರುವ ೨೦೧೪ರ ಕನ್ನಡ ಚಲನಚಿತ್ರವಾಗಿದೆ. ಮೋಹನ್ ಶಂಕರ್ ನಿರ್ದೇಶಿಸಿದ್ದಾರೆ ಮತ್ತು ಬಿಎನ್ ಗಂಗಾಧರ್ ನಿರ್ಮಿಸಿದ್ದಾರೆ. ಈ ಚಿತ್ರವು ವಾಣಿಜ್ಯೇತರ ಮನರಂಜನೆಯಾಗಿದೆ. ಮಾಸ್ಟರ್ ಸ್ನೇಹಿತ್ ಅವರು ಸ್ವಲೀನತೆಯ ಹುಡುಗನಾಗಿ ನಟಿಸಿದ್ದಾನೆ, ಅವನು ಕ್ರಿಕೆಟ್‌ನಲ್ಲಿ ಯಸಸ್ಸಿಗಾಗಿ ಹೆಣಗಾಡುತ್ತಾನೆ. ಸುಹಾಸಿನಿ ಮಣಿರತ್ನಂ ಅವನ ಸಹೋದರಿಯಾಗಿಯೂ, ಸುಧಾರಾಣಿ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಿಎನ್ ಗಂಗಾಧರ್ ನಿರ್ಮಾಣದ ಸಚಿನ್! ತೆಂಡೂಲ್ಕರ್ ಅಲ್ಲ,ಚಲನಚಿತ್ರವನ್ನು ೨೦೧೫ ರಲ್ಲಿ ಸಚಿನ್ ತೆಂಡೂಲ್ಕರ್ ಕಾದು ಎಂದು ತೆಲುಗಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು == ಪಾತ್ರವರ್ಗ == ಮಾಸ್ಟರ್ ಸ್ನೇಹಿತ್ ಜಾವಗಲ್ ಶ್ರೀನಾಥ್ ವೆಂಕಟೇಶ್ ಪ್ರಸಾದ್ ಸುಹಾಸಿನಿ ಮಣಿರತ್ನಂ ಸುಧಾರಾಣಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ! @ ಐ ಎಮ್ ಡಿ ಬಿ